top of page

ವೃತ್ತಿಪರ ಆನ್‌ಲೈನ್ ಅನುವಾದ ಸೇವೆಗಳು

Kannada

TranslationServices.com ಯಾವುದೇ ಭಾಷೆಯಲ್ಲಿ, ಯಾವುದೇ ವಿಷಯಕ್ಕೆ ಸಂಬಂಧಿಸಿದ ವೃತ್ತಿಪರ ಅನುವಾದವನ್ನು ಒದಗಿಸುತ್ತದೆ. ನಮ್ಮ ತಜ್ಞರ ತಂಡವು ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು ಮತ್ತು ವಿಶ್ವದಾದ್ಯಂತ ಅನೇಕ ತೃಪ್ತಿಕರ ಗ್ರಾಹಕರಿಗೆ ಸಾವಿರಾರು ದಾಖಲೆಗಳನ್ನು ಅನುವಾದಿಸಿದೆ. ನಿಮಗೆ ಕನ್ನಡ, ಇಂಗ್ಲಿಷ್, ಹಿಂದಿ, ಸ್ಪ್ಯಾನಿಷ್, ಅಥವಾ ಚೈನೀಸ್ ಭಾಷೆಗೆ ಅಥವಾ ಆ ಭಾಷೆಗಳಿಂದ ಅನುವಾದದ ಅಗತ್ಯವಿದ್ದರೂ, ನಿಮ್ಮ ಪ್ರಾಜೆಕ್ಟನ್ನು ಉನ್ನತ ಗುಣಮಟ್ಟದಲ್ಲಿ ಭಾಷಾಂತರಿಸುವ ಭರವಸೆಯನ್ನು ನಾವು ನೀಡುತ್ತೇವೆ.

 

ಕೋಟ್ ಗಾಗಿ ನಮ್ಮನ್ನು ಸಂಪರ್ಕಿಸಿ.

 

ನಾವು ಯಾವ ಸೇವೆಗಳನ್ನು ನೀಡುತ್ತೇವೆ?

 

TranslationServices.com ವಿವಿಧ ಹಿನ್ನೆಲೆಗಳುಳ್ಳ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಅನುವಾದಗಳನ್ನು ನೀಡುತ್ತದೆ, ಅಂದರೆ ವ್ಯವಹಾರಿಗಳಿಂದ ಹಿಡಿದು, ಲೇಖಕರು, ಶಿಕ್ಷಣತಜ್ಞರರವರೆಗೆ. ಕನ್ನಡಕ್ಕೆ ಅನುವಾದ ಸೇವೆಗಳನ್ನು ಒದಗಿಸುವುದರ ಜೊತೆಗೆ, ನಮ್ಮ ನಿಪುಣ ಅನುವಾದ ತಂಡವು ನಿಯಮಿತವಾಗಿ 100 ಕ್ಕೂ ಹೆಚ್ಚು ಭಾಷೆಗಳನ್ನು ಅನುವಾದಿಸುತ್ತದೆ.

 

ನಾವು ಒದಗಿಸುವುದು:

 

  • ಶೈಕ್ಷಣಿಕ ಅನುವಾದ. ಕನ್ನಡದಿಂದ ಇಂಗ್ಲಿಷ್‌ಗೆ, ಕನ್ನಡದಿಂದ ಜರ್ಮನ್‌ಗೆ, ಕನ್ನಡದಿಂದ ಜಪಾನೀಸ್‌ಗೆ ಮತ್ತು ಇತರ ಅನೇಕ ಭಾಷಾ ಜೋಡಿಗಳನ್ನು ನಾವು ಕೈಗೆಟುಕುವ ರೀತಿಯಲ್ಲಿ ಅನುವಾದಿಸಬಲ್ಲೆವು.

 

  • ವ್ಯವಹಾರ ಅನುವಾದ. ನೀವು ಕನ್ನಡದಿಂದ ಇಂಗ್ಲಿಷ್ ಅಥವಾ ಮತ್ಯಾವುದಾದರೂ ಭಾಷೆಗೆ ಕ್ಯಾಟಲಾಗ್ ಒಂದನ್ನು ಅನುವಾದಿಸುವ ಅಗತ್ಯವಿದೆಯೇ? ಮಾನವ ಸಂಪನ್ಮೂಲ ಕೈಪಿಡಿಗಳು, ಉತ್ಪನ್ನ ವಿವರಣೆಗಳು ಮತ್ತು ಇತರ ವ್ಯವಹಾರ ಮತ್ತು ಮಾರ್ಕೆಟಿಂಗ್ ವಿಷಯಗಳ ಕುರಿತು ನಾವು ವ್ಯಾಪಾರ ಅನುವಾದ ಸೇವೆಗಳನ್ನು ನೀಡುತ್ತೇವೆ.

 

  • ಸಾಹಿತ್ಯ ಅನುವಾದ. ನಿಮ್ಮ ಅಂತರರಾಷ್ಟ್ರೀಯ ಓದುಗರ ಸಂಖ್ಯೆಯನ್ನು ಹೆಚ್ಚಿಸಲು ಸಿದ್ಧರಿದ್ದೀರಾ? ಪ್ರಣಯ ಕಾದಂಬರಿಗಳಿಂದ ಹಿಡಿದು, ವೈಜ್ಞಾನಿಕ ಕಾದಂಬರಿ ಹಸ್ತಪ್ರತಿಗಳು ಮತ್ತು ಆತ್ಮಚರಿತ್ರೆಗಳವರೆಗೆ ನಾವು ಪ್ರತಿಯೊಂದು ಪ್ರಕಾರದ ಪುಸ್ತಕಗಳನ್ನು ಅನುವಾದಿಸಿದ್ದೇವೆ. ನಿಮ್ಮ ಭಾವ ಮತ್ತು ಶೈಲಿಯನ್ನು ಕಾಪಾಡಿಕೊಳ್ಳಲು ನಮ್ಮ ಸಾಹಿತ್ಯ ಅನುವಾದಕರು ಅಕ್ಷರಶಃ ಪದದಿಂದ- ಪದದ ಅನುವಾದವನ್ನು ಮೀರಿ ಪ್ರಯತ್ನ ಪಡುತ್ತಾರೆ.

 

  • ವೈದ್ಯಕೀಯ ಅನುವಾದ. ನಾವು ವೈದ್ಯಕೀಯ ಅನುವಾದವನ್ನು ನಾವಾಗೇ ಮಾಡುವುದಿಲ್ಲ, ಆದರೆ ನಾವು ವೈದ್ಯಕೀಯ ಅನುವಾದ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ, ಅದು ಟಿಪ್ಪಣಿಗಳು, ವೈದ್ಯಕೀಯ ವರದಿಗಳು, ರೋಗಿಗಳ ಸಂದರ್ಶನಗಳು ಮತ್ತು ಇತರ ವೈದ್ಯಕೀಯ ದಾಖಲೆಗಳನ್ನು ಕನ್ನಡಕ್ಕೆ ಅಥವಾ ಕನ್ನಡದಿಂದ ತ್ವರಿತವಾಗಿ ಮತ್ತು ನಿಖರವಾಗಿ ಅನುವಾದಿಸುತ್ತದೆ.

 

  • ಕಾನೂನು ಅನುವಾದ. ನಿಮ್ಮ ಆಶಯ ಪತ್ರಗಳು, ಅಫಿಡವಿಟ್‌ಗಳು, ಕರಾರು ಪತ್ರಗಳು, ಗೌಪ್ಯತಾ ನೀತಿಗಳು ಮತ್ತು ಇತರ ಕಾನೂನು ದಾಖಲಾತಿಗಳನ್ನು ಭಾಷಾಂತರಿಸಲು ಅನುಭವ ಮತ್ತು ಪರಿಣತಿಯನ್ನು ಹೊಂದಿರುವ ಕಾನೂನು ಅನುವಾದ ಸಂಸ್ಥೆಯೊಂದಿಗೆ ನಾವು ಪಾಲುದಾರಿಕೆ ಹೊಂದಿದ್ದೇವೆ. ನಮ್ಮ ಕಾನೂನು ಅನುವಾದ ಪಾಲುದಾರರು ಯಾವಾಗಲೂ ವೃತ್ತಿಪರ ಮತ್ತು ಗೌಪ್ಯವಾಗಿರುತ್ತದೆ.

 

  • ಪ್ರಮಾಣೀಕೃತ ಅನುವಾದ. ನಿಮಗೆ ಶೈಕ್ಷಣಿಕ ಪ್ರತಿಲೇಖನ, ಮದುವೆ ಅಥವಾ ವಿಚ್ಛೇದನ ಪ್ರಮಾಣಪತ್ರ ಅಥವಾ ವಲಸೆ ಅಥವಾ ಅಂತಹುದೇ ಉದ್ದೇಶಗಳಿಗಾಗಿ ಕನ್ನಡದಿಂದ ಅನುವಾದಿಸಬೇಕಾದ ಇತರ ನಿರ್ಣಾಯಕ ದಾಖಲೆಯ ಅಗತ್ಯವಿದ್ದರೆ ಈ ಸೇವೆಯನ್ನು ಆಯ್ದುಕೊಳ್ಳಿ.

 

  • ಸ್ಥಳೀಕರಣ. ನಿಮ್ಮ ವ್ಯವಹಾರವನ್ನು ವಿದೇಶಿ ಮಾರುಕಟ್ಟೆಗೆ ವಿಸ್ತರಿಸಲು ನೋಡುತ್ತಿರುವಿರಾ? ನಿಮ್ಮ ವಸ್ತುವಿಷಯವನ್ನು ನಿರ್ದಿಷ್ಟ ದೇಶಗಳು ಮತ್ತು ಪ್ರದೇಶಗಳಿಗೆ ನಾವು ಸರಿಹೊಂದಿಸುತ್ತೇವೆ.

 

  • ಉಪಶೀರ್ಷಿಕೆ (ಸಬ್‌ಟೈಟಲ್‌). ನಾವು ನಿಮ್ಮ ವೀಡಿಯೊಗಳಲ್ಲಿರುವ ಕನ್ನಡ ಸಂವಾದವನ್ನು ಅನುವಾದಿಸಬಲ್ಲೆವು ಮತ್ತು ಇಟಾಲಿಯನ್, ಪೋರ್ಚುಗೀಸ್ ಅಥವಾ ವಿಯೆಟ್ನಾಮೀಸ್‌ನಂತಹ ಇನ್ಯಾವುದಾದರೂ ಭಾಷೆಯಲ್ಲಿ ಉಪಶೀರ್ಷಿಕೆಗಳನ್ನು ರಚಿಸಬಲ್ಲೆವು.

 

  • ಸಾಮಾನ್ಯ ಅನುವಾದ. ಕನ್ನಡ ಭಾಷೆಯಲ್ಲಿರುವ ಡಾಕ್ಯುಮೆಂಟ್ ನ ಅನುವಾದ ನಿಮಗೆ ಅತಿ ವೇಗವಾಗಿ ಬೇಕೇ? ನಾವು ಈ ಎಲ್ಲವನ್ನೂ ಕೈಗೆಟುಕುವ ಬೆಲೆಯಲ್ಲಿ ಮತ್ತು ನಿಖರವಾಗಿ ಅನುವಾದಿಸುತ್ತೇವೆ, ಆದ್ದರಿಂದ ನಿಮ್ಮ ಕನ್ನಡ ಅನುವಾದ ಅಗತ್ಯಗಳನ್ನು ಚರ್ಚಿಸಲು ನಮ್ಮನ್ನು ಸಂಪರ್ಕಿಸಿ.

 

ನಾವು ಯಾರು?

 

TranslationServices.com ನಲ್ಲಿನ ಅನುವಾದಕರು ಹೆಚ್ಚು ಅರ್ಹ ವೃತ್ತಿಪರರು, ಪ್ರಮಾಣೀಕೃತ ಅನುಭವಿಗಳು ಮತ್ತು ವಿವರಗಳಿಗೆ ಅತಿಸೂಕ್ಷ್ಮವಾದ ಗಮನವನ್ನು ನೀಡುವವರು. ನಮ್ಮ ಕನ್ನಡ ಭಾಷಾಂತರಕಾರರು ಹಲವಾರು ವಿಷಯಗಳಲ್ಲಿ ಪರಿಣತಿ ಹೊಂದಿದ್ದಾರೆ, ಅಂದರೆ ನಾವು ಪ್ರತಿ ಯೋಜನೆಯನ್ನು ಸೂಕ್ತ ತಂಡದ ಸದಸ್ಯರಿಗೆ ನಿಯೋಜಿಸುತ್ತೇವೆ. ಸರಳವಾಗಿ ಹೇಳುವುದಾದರೆ, ನಾವು ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು ಮತ್ತು ಇತರೆಡೆ ಜನರಿಗೆ ಉತ್ತಮ ಅನುವಾದ ಸೇವೆಗಳನ್ನು ನೀಡುತ್ತೇವೆ.

 

TranslationServices.com ನೊಂದಿಗೆ ಏಕೆ ಕೆಲಸ ಮಾಡಬೇಕು?

 

  • ನಾವು ಯಾವುದೇ ವಿಷಯ ಅಥವಾ ಪ್ರಕಾರಕ್ಕೆ ತಕ್ಕಂತೆ ಕೈಗೆಟುಕುವ ಬೆಲೆಯಲ್ಲಿ ಮತ್ತು ನಿಖರವಾಗಿ ವ್ಯವಹಾರ, ಶೈಕ್ಷಣಿಕ ಮತ್ತು ಸಾಹಿತ್ಯಿಕ ಅನುವಾದವನ್ನು ಒದಗಿಸುತ್ತೇವೆ.

 

  • ನಾವು ಯಾವುದೇ ವಿಷಯಕ್ಕೆ, ಯಾವುದೇ ಭಾಷೆಯಲ್ಲಿ ವೃತ್ತಿಪರ ಮಾನವ ಅನುವಾದವನ್ನು ನೀಡುತ್ತೇವೆ.

 

  • ಇತರ ಅನುವಾದ ಸೇವೆಗಳಂತೆ, ನಾವು ಯಾಂತ್ರಿಕ ಅನುವಾದವನ್ನು ಅವಲಂಬಿಸುವುದಿಲ್ಲ; ನಾವು ಪ್ರತಿ ಅನುವಾದದ ಪ್ರಾಜೆಕ್ಟನ್ನು ನಮ್ಮ ವೃತ್ತಿಪರ ತಂಡದ ಸದಸ್ಯರಿಗೆ ವಹಿಸುತ್ತೇವೆ.

 

ನಮ್ಮ ವೃತ್ತಿಪರ ಭಾಷಾಂತರಕಾರರು ಸಾಧಿಸುವ ಗುಣಮಟ್ಟದ ಉನ್ನತ ದರ್ಜೆಯ ಕೆಲಸಗಳ ಬಗ್ಗೆ ನಮಗೆ ಹೆಮ್ಮೆ ಇದೆ, ಮತ್ತು ನಮ್ಮ ಕೆಲಸದಿಂದ ನಿಮಗೆ ತೃಪ್ತಿಯಾಗುವುದನ್ನು ನಾವು ಖಾತರಿಪಡಿಸುತ್ತೇವೆ.

 

ಕೋಟ್ ಗಾಗಿ ನಮ್ಮನ್ನು ಸಂಪರ್ಕಿಸಿ.

bottom of page